ದಶಕದ ಸಂಭ್ರಮದಲ್ಲಿ ಜೀ ವಾಹಿನಿ : ಸಾಧಕರಿಗೆ ಗೌರವ
Posted date: 03 Wed, Aug 2016 – 08:27:14 AM

 ಕನ್ನಡ ಕಿರುತೆರೆ ಛಾನಲ್‌ಗಳಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ಮನರಂಜನಾ ವಾಹಿನಿ ಕಳೆದ ೧೦ ವರ್ಷಗಳಿಂದಲೂ  ಕನ್ನಡ ನಾಡಿನ ಜನತೆಗೆ  ಹೊಸ ಹೊಸ ಶೈಲಿಯ  ಕಾರ್ಯಕ್ರಮಗಳನ್ನು  ನೀಡುವ  ಮೂಲಕ ಕನ್ನಡಿಗರ ಮನೆ-ಮನಗಳಲ್ಲಿ ವಿಶೇಷವಾದ ಸ್ಥಾನಮಾನವನ್ನು ಪಡೆದಿದೆ. ಅಂಥಾ ವಾಹಿನಿ  ಇದೀಗ ತನ್ನ ಹತ್ತು ವರ್ಷಗಳ ಸೇವಾವಧಿಯನ್ನು ಪೂರೈಸಿದೆ. ಈ ದಶಕದ ಯಶಸ್ಸಿನ ಹಾದಿಯನ್ನು  ಮೆಲುಕುಹಾಕುವ ನಿಟ್ಟಿನಲ್ಲಿ ದಶಕದ ಸಂಭ್ರಮ ಎಂಬ ವಿಶಿಷ್ಟವಾದ ವರ್ಣರಂಜಿತ ಕಾರ್ಯಕ್ರಮವೊಂದನ್ನು ಜೀ ಕನ್ನಡ ವಾಹಿನಿ ತಂಡ ಆಯೋಜಿಸಿದೆ.
   ಜೀ ವಾಹಿನಿ ತನ್ನ ಹತ್ತು ವರ್ಷಗಳ ಸಾಧನೆಯನ್ನು ಅವಿಸ್ಮರಣೀಯಗೊಳಿಸಲು ೨೦ ಜನ ಸಾಧಕರನ್ನು ಗೌರವಿಸುವ ಯೋಜನೆಯನ್ನು ಹಾಕಿಕೊಂಡಿದೆ. ಕಳೆದ ಒಂದು ದಶಕದಲ್ಲಿ ಶ್ರೇಷ್ಠಸಾಧನೆ ಮಾಡಿದ ಮನರಂಜನಾ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳ ೨೦ ಜನ ಸಾಧಕರನ್ನು ಗುರುತಿಸಲಾಗಿದೆ. ಸಿನಿಮಾ, ಕಿರುತೆರೆ, ರಂಗಭೂಮಿಯ ಜೊತೆಜೊತೆಗೆ ಪತ್ರಿಕೋದ್ಯಮ, ರಾಜಕೀಯ, ಸಾಹಿತ್ಯ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಹಲವಾರು ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ದಶಕದ ಕನ್ನಡಿಗರು ಎಂದು ವಿಶೇಷವಾಗಿ ಗೌರವಿಸಿ, ಸನ್ಮಾನಿಸಲು ಜೀ ಕನ್ನಡ ತಂಡ ಯೋಜನೆಯನ್ನು  ಹಾಕಿಕೊಂಡಿದೆ.
    ೨೦೦೬ರಿಂದ ೨೦೧೬ರವರೆಗಿನ ಈ ದಶಕವು ಅನೇಕ ಪ್ರಮುಖವಾದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.  ಮನರಂಜನಾ ಕ್ಷೇತ್ರದ ಎ ವಿಭಾಗಗಳಲ್ಲೂ  ಅಮೂಲಾಗ್ರ ಬೆಳವಣಿಗೆಗಳಾಗಿರುವುದು ಇಲ್ಲಿ ಗಮನಾರ್ಹ. ಕನ್ನಡ ಚಿತ್ರರಂಗಕ್ಕೆ ಹಲವಾರು ನಟ, ನಟಿಯರ ಪರಿಚಯವಾಗಿದ್ದು ಅವರೆಲ್ಲಾ ದಿಗ್ಗಜರಾಗಿ ಬೆಳೆದ ರೋಚಕ ಕಥೆಗಳು, ಈಗ ಧೃವತಾರೆಯರಂತೆ ರಾರಾಜಿಸುತ್ತಿದ್ದವರ ಹಿಂದಿನ ಕಷ್ಟದ ದಿನಗಳ ಪರಿಚಯ, ಅಂಥವರ ಸಾಧನೆಯ ಕಥೆಗಳು ಕೂಡ ರೋಚಕವಾಗಿವೆ. ತಮ್ಮ ನಟನೆ, ನಿರ್ದೇಶನ, ಸಂಗೀತ, ಸಾಹಿತ್ಯ, ಗಾಯನ ಹೀಗೆ ನಾನಾ ವಿಭಾಗಗಳಲ್ಲಿ  ಅನೇಕ ಪ್ರತಿಭಾವಂತರು ಕಳೆದೊಂದು  ದಶಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿzರೆ. ಜೀ ಕನ್ನಡದ ಈ ತಾರಾಮೇಳದಲ್ಲಿ ಅಂಥವರೆಲ್ಲ ಭಾಗವಹಿಸಲಿದ್ದಾರೆ. ನಟ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್, ಯಶ್, ಗಣೇಶ್, ದುನಿಯಾ ವಿಜಯ್, ರಾಧಿಕಾ ಪಂಡಿತ್, ಪ್ರಣೀತಾ ಸೇರಿದಂತೆ ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಈ ಸಮಾರಂಭದಲ್ಲಿ   ಭಾಗವಹಿಸುವ ಸಾಧ್ಯತೆಯಿದೆ. ಈಗಾಗಲೇ ಅನೇಕ ತಾರೆಯರು ಈ  ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿದ್ದು, ಸ್ಯಾಂಡಲ್‌ವುಡ್‌ನ ಹಲವಾರು ಸೂಪರ್‌ಸ್ಟಾರ್‌ಗಳನ್ನು ಒಂದೇ ವೇದಿಕೆಯಲ್ಲಿ ಕಾಣುವ ಅವಕಾಶ ಜೀ ವೀಕ್ಷಕರಿಗೆ ಲಬಿಸಲಿದೆ. ಅವರೆಲ್ಲ ವೇದಿಕೆಯಲ್ಲಿ ಹಾಡುಗಳಿಗೆ ಹೆಜ್ಜೆಹಾಕಿ ಅಭಿಮಾನಿಗಳನ್ನು   ರಂಜಿಸಲಿzರೆ.
    ಈ ಅವಿಸ್ಮರಣೀಯ ದಶಕದ ಸಂಭ್ರಮ ಕಾರ್ಯಕ್ರಮವನ್ನು ಇದೇ ಆಗಸ್ಟ್ ೬ರ ಶನಿವಾರ ಸಂಜೆ ೬-೩೦ ರಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ವೀPಕರಿಗೆ ಉಚಿತ ಪಾಸುಗಳನ್ನು ವಿತರಿಸಲಾಗುತ್ತಿದೆ. ಕನ್ನಡ ಕಿರುತೆರೆ ಇತಿಹಾಸದ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವನ್ನಾಗಿ ಮಾಡುವ ಉದ್ದೇಶ ಈ ತಂಡಕ್ಕಿದೆ. ಇಡೀ ಕಾರ್ಯಕ್ರಮವನ್ನು ನಟ ರಮೇಶ್ ಅರವಿಂದ್, ಮಾ.ಆನಂದ್ ಹಾಗೂ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed